ಈಗಿನ ಕಾಲದಲ್ಲಿ ಮೊಬೈಲ್ ,ಇಂಟರ್ನೆಟ್ ಇಲ್ಲದೆ ಇರೊ ಜನಗಳೇ ಇಲ್ಲಾ.. ಮನಸ್ಸು ಬೆಜಾರ್ ಆಗ್ಲಿ,,,ಪ್ರೀತಿ ಕೈ ಕೊಡ್ಲಿ,,, ಅಪ್ಪಾ ಅಮ್ಮಾ ಬೈಲಿ,,, ಇವೆಲ್ಲಾ ಓಕೆ.. ಅರಾಮ್ ಇಲ್ಲಾ ಇನ್ನೆನ ಹೊಗೆ ಹಾಕಿಸ್ಕೊಬೇಕು ಅನ್ನೊ ಸ್ತಿತಿಯಲ್ಲಿ ಇದ್ರು ಮೊಬೈಲ್ ಬಿಡಲ್ಲಾ.... ಅದ್ರಲ್ಲು WhatsApp,Facebook ಇಲ್ಲಾ ಅಂದ್ರೆ ಪ್ರಾಣಾನೇ ಬಿಟ್ ಬಿಡ್ತಾರೆ... ಅದ್ರಲ್ಲಿ ಎಲ್ಲಾ ರೀತಿಯ ವಿಡಿಯೊ,ಆಡಿಯೊ,ಫ್ಹೊಟೊ ನೊಡ್ತತಾನೆ ಇರ್ಬೆಕು ಕೆಲವೊಬ್ರಿಗೆ.. ಅದರ ಬಗ್ಗೆ ಯೊಚನೆ ಮಾಡಿ ತಲೆ ಕೆಡಿಸಿಕೊಂಡು..ನಿದ್ದೆ ಮಾಡದೆ ಇರೊರು ತುಂಬಾ ಜನಾ.... ಅದ್ರಲ್ಲಿ ನಾನು ಒಬ್ಬ.. ಹೀಗೆ 3 ದಿನದ ಹಿಂದೆ.. ಆತ್ಮೀಯರು ಅನ್ನೊ whats app group ನಲ್ಲಿ ಚರ್ಚೆ ಪ್ರಾರಂಭ ಅಯ್ತು... ಯಾವದ್ರ ಬಗ್ಗೆ ಅಂತಿರಾ... ಅದೇ ಯಾರದ್ರು ಬಾಯ್ ನಲ್ಲಿ ಆ ಹೆಸರು ಬಂದ್ರೆ ಒಂದು ಸಲಾ ಸುಮ್ಮನೇ ಇರಿಸೋ ಪದ ದೆವ್ವಾ, ಭೂತಾ.. ನನಗಂತೂ ಮೊದಲೇ ಕುತುಹಲಾ ಬೇರೆ.. ರಾತ್ರಿ 8 ಕ್ಕೆ ಶುರು ಮಾಡಿದ್ದು ದೆವ್ವಾ ಇದಿಯೋ ಇಲ್ವೂ ಹೆಳಿ... ಕೆಲವೊಬ್ರು ಇದೆ ಅನ್ನೊಕೆ.. ಇನ್ ಕೆಲವೊಬ್ರು ಇಲ್ಲಾ ಅನ್ನೊಕೆ.. ಈ ಹುಡುಗರ ವಾದ ದಲ್ಲಿ ಹುಡುಗಿರ ಗೊಳಾಟಾ ಬೇಡಾ.. ಬಾಯ್ಯೊಕೆ ಶುರು ಮಾಡಿದ್ರು.. ಯಾಕೆ ಹೆದರ್ಸ್ತಿರಾ ಅಂತಾ... ನಾವು ಸುಮ್ನೆ ಆಗ್ತಿವಾ.. ದೆವ್ವಾ ಇರೊ ಫೊಟೊ,ವಿಡಿಯೋ ಗಳನ್ನಾ ಗೂಗಲ್‌ನಲ್ಲಿ Download ಮಾಡಿ group ನಲ್ಲಿ ಹಾಕೊದು... ಇದನ್ನಾ ನೊಡೊಕೆ ಆಗದೆ ಹುಡುಗಿಯರು ಬಯ್ಯೊರು ಹೆದರ್ಸ್ ಬೇಡಿ ಅಂತ.. ಕೆಲವೊಬ್ರು group ಬಿಟ್ಟೇ ಹೊದ್ರು... ನಾವು ತಲೆ ಕೆಡಿಸ್ಕೊಳ್ಲದೆ ವಾದಾ ನಡಿತಾ ಇತ್ತು... ಅಮೇಲೆ ವಾದಾ ಮಾಡೊಕೆ ಆಗದೆ ಲೆಟ್ ಅಯ್ತು ಅಂತಾ ಮಲ್ಕೊಂಡ್ರು ಅನ್ಸುತ್ತೆ... ಅದ್ರೆ ನಾನ್ ಮಾತ್ರ ಕುತೂಹಲದಿಂದ ಸುಮ್ನೆ ಇರದೆ... ಅದೆನೂ ಹೆಳ್ತಾರಲಾ ಕೆಲಸ ಇಲ್ಲದೆ ಇರೊ ಬಡಗಿ.. ಸುಮ್ಮನೆ ಇರೊಕೆ ಆಗದೆ ಮಗನ ...... ಕೆತ್ತದ್ನಂತೆ ಅಂತಾ...! ಹಾಗೆ ನಾನು YouTube ನಲ್ಲಿ ಇರೊಬರೊ ದೆವ್ವದ ವಿಡಿಯೋ ನೊಡತಾ ಇದ್ದೆ.. ಎಷ್ಟರ ಮಟ್ಟಿಗೆ ತಲೆ ಒಳಗೆ ಹೊಗಿತ್ ಅಂದ್ರೆ ರಾತ್ರಿ 12 ಆಗಿದೆ...! ನಾನು ಇರೊದು ಬೇರೆ company flat ನಲ್ಲಿ ನಾನು ನನ್ನ roommate. ಅವ್ನು ಆವಾಗ್ಲೆ ದಬ್ ಹಾಕ್ಕೋಂಡಿದ್ದ.. ಸರಿ ಇನ್ನೇನು ಅಂತಾ ನನು ಮಲಗೊಕೆ ರೂಮ್ ಗೆ ಹೋದೆ...light off ಮಾಡಿ ಮಲಗಿದಿನಿ ಆದ್ರೆ ನನ್ ಮನಸ್ಸು ಯೊಚನೆ ಮಾತ್ರಾ ಅದೆ topic ಕೊರಿತಾ ಇತ್ತು.. ಕಣ್ ಮುಚ್ಚಿದ್ರು ಅದೆ ದೃಶ್ಯ..ಹೊರಗಡೆ ತುಂಬಾ ಗಾಳಿ ಬರ್ತಾ ಇತ್ತು.. ಆ ಗಾಳಿ ಗೆ ಮುಚ್ಚಿದ ಕಿಡಕಿ ತೆರ್ಕೊಂಡಿಲ್ಲಾ ಅನ್ನಿ😉...! ಆದ್ರೆ ಕಿಡಕಿ ಸಂದಿ ಇಂದ ಸುಯ್ ಅಂತಾ ಗಾಳಿ ಬರ್ತಾ ಇತ್ತು... ಇಡೀ ರೂಮ್ ನಲ್ಲಿ ಆ ಗಾಳಿ ಸಪ್ಪಳ ಬಿಟ್ರೆ ಬೇರೆ ಏನು ಕೆಳಿಸ್ತಾ ಇಲ್ಲಾ... ಕಿತ್ತೊಗಿರೋ AC ಬೇರೆ ಆವಾಗಾ ಆವಾಗಾ ಕಟಕ್ ಕಟಕ್ ಅಂತಾ ಶಬ್ದ ಮಡ್ತಾ ಇದೆ.. ಬಾತ್ ರೂಮ್ ಬಾಗಿಲು ಒಳಗಿಂದ ಬರ್ತಾ ಇರೊ ಗಾಳಿಗೆ ಸಣ್ಣಗೆ ಬಡಕೊಳ್ತಾ ಇದೆ... ಕಣ್ಣು ತೆಗಿಯೋಕೆ ಭಯಾ ಅಗ್ತಾ ಇದ್ರು... ಆದ್ರು ಎನಾದ್ರು ಸಾಯ್ಲಿ ಅಂತಾ ಕಣ್ ತೆಗದ್ರೆ ಗೋಡೆ ಮೇಲೆ ಎನೋ ಆಕೃತಿ ಕಾಣಸ್ತಾ ಇದೆ...! ಅಲ್ಲಿಗೆ ನಾನ್ ಸತ್ತೆ ಅಂದ್ ಕೋಂಡು ಮುಚ್ಚಾಕೊಂಡ್ ಮಲ್ಕೊಂಡಿದ್ ಮಾತ್ರಾ ಗೊತ್ತು... ಬೆಳಿಗ್ಗೆ ಆಗಿತ್ತು ಕಣ್ಣು ಬಿಟ್ಟಾಗಾ... ರತ್ರಿ ಆಗಿದ್ದು ಅನುಭವ ನಿಜಾ ನಾ ಕನಸಾ ಅಂತಾ ಗೊತ್ತಾಗ್ತಾ ಇಲ್ಲಾಗಿತ್ತು...!ಹೀಗೆ ಒಬ್ಬೊಬ್ಬರಿಗೆ ಒಂದು ಒಂದು ಯೋಚನೆಗಳು ಮನಸ್ಸಿನ ಆಳದಲ್ಲಿ ಹೊಕ್ಕಿ ಕಾಲ್ಪನಿಕ ಆಕೃತಿಗಳನ್ನು ಸೃಷ್ಟಿ ಮಾಡುತ್ತದೆ.. ಅದಕ್ಕೆ social apps ಗಳನ್ನ ಮಿತವಾಗಿ ಬಳಸಬೇಕು..
ಹೆಳೋಕೆ ಮರ್ತೆ ನೋಡಿ..
ಆ ಗೋಡೆಮೇಲೆ ಕಂಡ ಆಕೃತಿ ಏನು ಗೋತ್ತಾ..! ಕಿಡಕಿ Glass ಮೇಲೆ ಇದ್ದ ಧೂಳಿನ ಕಲೆ..ಹೊರಗಿನ light ಬೆಳಕಿಗೆ ಆಕೃತಿ ತರ ಕಾಣಸ್ತಾ ಇತ್ತು..😉